ಬೇರೆಯವರ ಪ್ರತೀ ಮಾತಿಗೆ ಕಿವಿ ಕೊಟ್ಟಾಗ ನಮಗೆ ಆಗುವ ನಷ್ಟ ಬಹಳ
ಒಮ್ಮೆ ಒಬ್ಬ ಮುದುಕ ಮತ್ತು ಅವನ ಮಗ ಕತ್ತೆಯನ್ನು ಮಾರಲು ಕಾಲು ನಡಿಗೆಯಲ್ಲಿ ಹೋಗುತ್ತಿದ್ದರು.
ಅವರು ಮಾರುಕಟ್ಟೆಯಿಂದ ಹಾದುಹೋಗುವಾಗ ಕೆಲವರು ಹೇಳಿದರು. "ನೋಡಿ ಅವರ ಬಳಿ ಕತ್ತೆ ಇದ್ದರೂ ಅವರು ನಡೆದುಕೊಂಡು ಹೋಗುತ್ತಿದ್ದಾರೆ. ನಿಮ್ಮಲ್ಲಿ ಒಬ್ಬರು ಕತ್ತೆಯ ಮೇಲೆ ಏಕೆ ಕುಳಿತುಕೊಳ್ಳಬಾರದು ?".
ಇದನ್ನು ಕೇಳಿದ ಮುದುಕ "ನೀವು ಹೇಳಿದ್ದು ಸರಿ" ಎಂದು ಅವನು ತನ್ನ ಮಗನನ್ನು ಕತ್ತೆಯ ಮೇಲೆ ಕೂರಿಸುತ್ತಾನೆ.
ಅವರು ಹಳ್ಳಿಯಿಂದ ಹಾದುಹೋಗುವಾಗ ಒಬ್ಬ ವ್ಯಕ್ತಿ ಅಪಹಾಸ್ಯ ಮಾಡಿ ವಯಸ್ಸಾದ ತಂದೆ ಕಾಲುನಡಿಗೆಯಲ್ಲಿ. ತರುಣ ಮಗ ಕತ್ತೆಯ ಮೇಲೆ ಎಂದು ಅಪಹಾಸ್ಯ ಮಾಡುತ್ತಾನೆ.
ಈಗ ಮುದುಕ ಮಗನನ್ನು ಕೆಳಗಿಳಿಸಿ ತಾನು ಕತ್ತೆಯ ಮೇಲೆ ಕುಳಿತುಕೊಳ್ಳುತ್ತಾನೆ.
ಈಗ ಅಲ್ಲಿಂದಲೇ ಹಾದು ಹೋಗುತ್ತಿದ್ದ ಮಹಿಳೆಯೊಬ್ಬಳು "ನೋಡು ಮುದುಕನೊಬ್ಬನೇ ಕತ್ತೆಯ ಮೇಲೆ ಕುಳಿತಿದ್ದಾನೆ ಇಬ್ಬರೂ ಯಾಕೆ ಕುಳಿತುಕೊಳ್ಲಬಾರದು"
ಎಂದು ನಗುತ್ತಾಳೆ..
ಈಗ ಇಬ್ಬರೂ ಕತ್ತೆಯ ಮೇಲೆ ಕುಳಿತುಕೊಳ್ಳುತ್ತಾರೆ.
ಈಗ ದಾರಿಯಲ್ಲಿ ಹೋಗುವ ಜನರು ಇವರನ್ನು ನೋಡಿ ಮತ್ತೆ ಅಪಹಾಸ್ಯ ಮಾಡುತ್ತಾರೆ "ನೋಡಿ ಇಬ್ಬರೂ ಆ ದುರ್ಬಲ ಕತ್ತೆಯ ಮೇಲೆ ಕುಳಿತ್ತಿದ್ದಾರೆ ಇದು ಎಷ್ಟು ನಾಚಿಕೆಕೇಡು"
ಈಗ ಇಬ್ಬರು ಸೇರಿ ಕಟ್ಟೆಯನ್ನು ಒಂದು ಕಂಬಕ್ಕೆ ಕಟ್ಟಿ ತಲೆಕೆಳಕ್ಕಾಗಿ ನೇತು ಹಾಕಿ ಅದನ್ನು ಹೆಗಲ ಮೇಲೇ ಹಾಕಿ ಹೊತ್ತುಕೊಂಡು ಹೋಗುತ್ತಾರೆ.
ದಾರಿ ಹೋಕರು ಅವರನ್ನು ನೋಡಿ ಮತ್ತೆ ಗೇಲಿ ಮಾಡುತ್ತಾರೆ. ಈ ಶಬ್ದದಿಂದ ಕೊಸರಾಡಿದ ಕತ್ತೆ ಕಟ್ಟಿದ ಹಗ್ಗದಿಂದ ಕಳಚಿಕೊಂಡು ನದಿಗೆ ಬಿದ್ದು ಪ್ರಾಣವನ್ನೇ ಕಳೆದುಕೊಳ್ಳುತ್ತದೆ.ಬೇರೆಯವರ
ಪ್ರತೀ ಮಾತಿಗೆ ಕಿವಿ ಕೊಟ್ಟಾಗ ನಮಗೆ ಆಗುವ ನಷ್ಟ ಬಹಳ

Comments
Post a Comment