ಪ್ರಸಿದ್ದವಾದ ಹೋಟೆಲೊಂದರಲ್ಲಿ ಒಬ್ಬ ವ್ಯಕ್ತಿ ನಿಶ್ಯಬ್ದವಾಗಿ ಬಂದು

ನಾವು ಬೇರೆಯವರಿಗೆ ತಿನ್ನಿಸ್ತಿದೇವೆ ಅಥವಾ ಕೊಡುತ್ತಿದ್ದೇವೆ ಅನ್ನು ಅಹಂ ನಮ್ಮಲಿರಬಾರದು. ಯಾರಿಗೆ ಗೊತ್ತು ನಾವೇ ಬೇರೆಯವರ ಭಾಗ್ಯದಲ್ಲಿ ತಿನ್ನುತಾ ಇರಬಹುದೇನೋ... 

ಪ್ರಸಿದ್ದವಾದ ಹೋಟೆಲೊಂದರಲ್ಲಿ ಒಬ್ಬ ವ್ಯಕ್ತಿ ನಿಶ್ಯಬ್ದವಾಗಿ ಬಂದು ತನಗೆ ಬೇಕಾದುದನ್ನು ಆರ್ಡರ್ ಮಾಡಿ ತಿಂದು ಸುಮ್ಮನೆ ಹಾಗೆ ಹೋಗುತ್ತಿದ್ದ. 

ಆ ಹೋಟೆಲ್ನಲ್ಲಿ ಎಷ್ಟು ಜನ ತುಂಬಿರ್ತಾ ಇದ್ರು ಅಂದ್ರೆ ಆ ಜನರ ಗುಂಪಿನಲ್ಲಿ ಇವನು ಬಂದು ದುಡ್ಡು ಕೊಡದೆ ಹಾಗೆ ಹೋಗುವುದು ಯಾರೂ ಗಮನಿಸಿದಂತಿರಲಿಲ್ಲ. 

ಆದರೆ ಸುಮಾರು ಒಂದು ವಾರದಿಂದ ವ್ಯಕ್ತಿಯೊಬ್ಬ ಇವನನ್ನು ಗಮನಿಸಿದ. ಅವನೊಬ್ಬ ಬಿಸಿನೆಸ್ ಮ್ಯಾನ್ ಆಗಿರೋದ್ರಿಂದ ಇದ್ಯಾಕೋ ಸರಿಯಿಲ್ಲ ಬಡವನಾದರೇನು ಧರ್ಮಕ್ಕೆ ತಿನ್ಕೊಂಡು ಹೋಗೋದು ಹೇಗೆ ? 

ಈ ವಿಚಾರವನ್ನು ಈ ಹೋಟೆಲಿನ ಮಾಲಿಕನಿಗೆ ಹೇಳಲೇಬೇಕು ಎಂದು ತೀರ್ಮಾನಿಸಿ...... ಒಂದು ದಿನ ಮಾಲೀಕನೊಂದಿಗೆ ಮಾತಾಡಿದ.

ನಿಮ್ಮ ಹೋಟೆಲಿಗೆ ಒಬ್ಬ ವ್ಯಕ್ತಿ ಬಂದು ದಿನಾಲೂ ಧರ್ಮಕ್ಕೆ ತಿನ್ಕೊಂಡು ಹೋಗ್ತಾನೆ ನೀವಾಗಲಿ ನಿಮ್ಮ ಕೆಲಸಗಾರರಾಗಲಿ ಇದನ್ನು ಗಮನಿಸಿದಂತಿಲ್ಲವಲ್ಲ ಎಂದ. 

ಹೋಟೆಲ್ ಓನರ್ ಅಯ್ಯೋ ಅದನ್ನು ಹೇಳಲು ನೀವು ಎಷ್ಟೋತ್ತು ಕಾದಿದ್ದ ? 

ನಮಗೆಲ್ಲರಿಗೂ ಗೊತ್ತಿರೋ ವಿಚಾರ ಇದು ಪರ್ವಾಗಿಲ್ಲ ಬಿಡಿ ಎಂದ. 

ಅದೇಗೆ ನೀವು ಪರ್ವಾಗಿಲ್ಲ ಅಂತೀರಿ ಎಂದಾಗ ಹೋಟೆಲ್ ಓನರ್ ಈ ಹೋಟೆಲ್ನಲ್ಲಿ ಬಿಸಿನೆಸ್ ನಡೆಯೋದೆ ಅವನಿಂದ ಎಂದ. ಇದನ್ನು ಕೇಳಿ ಅವಕ್ಕಾದ ಬಿಸಿನೆಸ್ ಮ್ಯಾನ್ ಅದು ಹೇಗೆ ಎಂದು ಕೇಳಿದ. 

ಹೋಟೆಲ್ ಓನರ್ ಆ ವ್ಯಕ್ತಿ ಒಬ್ಬ ಭಿಕ್ಷುಕ ಅಲ್ಲೊಂದು ಪೇಟೆಯಲ್ಲಿ ಭಿಕ್ಷೆ ಬೇಡುತ್ತಾನೆ. ದಿನ ಬೆಳಿಗ್ಗೆ ಬಂದು ಈ ಹೋಟೆಲ್ ಎದುರು ಹೇಗೆಂದು ಪ್ರಾರ್ಥಿಸುತ್ತಾನೆ 

" ಅಯ್ಯೋ ದೇವಾ ಇವತ್ತು ಕೂಡ ಈ ಹೋಟೆಲ್ನಲ್ಲಿ ಜನ ಸಂದಣಿ ತುಂಬಿರಲಿ ಆ ಜನ ಸಂದಣಿ ಮದ್ಯೆ ನಾನು ಬಂದು ಹೊಟ್ಟೆ ತುಂಬಾ ಊಟ ಮಾಡಿ ಹೋಗುವಂತಾಗಲಿ" 

ಎಂದು. 

ಅವನ ಪ್ರಾರ್ತನೆಯಿಂದಾನೆ ನಮ್ಮ ಹೋಟೆಲ್ ಇಷ್ಟೊಂದು ದೊಡ್ಡದಾಗಿ ಬೆಳೆದದ್ದು..... 

ಅವನಿಂದನೆ ನಮ್ಮ ಹೋಟೆಲ್ ಇಷ್ಟೊಂದು ಪ್ರಸಿದ್ಧಿಯಾಗಿರೋದು ಎಂದ. ಇದನ್ನೇ ಹೇಳೋದು. 


ನಾವೇ ಇನ್ನೊಬ್ಬರಿಗೆ ಕೊಡುತ್ತ ಇದ್ದೇವೆ ಅನ್ನೋ ಮೊದಲು ನಾವೇ ಬೇರೆಯವರ ಕೃಪೆಯಿಂದ ಬದುಕುತ್ತಿರಬಹುದೇನೋ 

Comments

Popular posts from this blog

ಬೇರೆಯವರ ಪ್ರತೀ ಮಾತಿಗೆ ಕಿವಿ ಕೊಟ್ಟಾಗ ನಮಗೆ ಆಗುವ ನಷ್ಟ ಬಹಳ

ಕಠಿಣ ಪರಿಶ್ರಮದಿಂದ ಏನು ಬೇಕಾದರೂ ಸಾದಿಸಬಹುದು.