ಅರ್ಜುನನ ಕಣ್ಣಾಲಿಗಳು ತೇಲಿ ಬಂದವು. ಅವನು ಭಾವುಕನಾದ. ಅರ್ಜುನ ಶ್ರೀ ಕೃಷ್ಣ ನಿಗೆ ನಮಸ್ಕರಿಸಿ ಮಂಡಿಯೂರಿದ.
ನಿಮ್ಮ ಜೀವನವನ್ನು ದೇವರ ಕೈಯಲ್ಲಿ ಸಮರ್ಪಿಸಿ ದೇವರಿಗೆ ಬಿಟ್ಟು ಬಿಡಿ.,,, ಯಾಕೆಂದರೆ ನೀವು ಜೀವನ ಪೂರ್ತಿ ಮಾಡಬಹುದಾದ ಸಾಧನೆ ದೇವರು ಒಂದೇ ಕ್ಷಣದಲ್ಲಿ ಮಾಡಿ ಮುಗಿಸುತ್ತಾನೆ...... ಇದು ಮಹಾಭಾರತ ಯುದ್ಧದ ಸಮಯ. ಯುದ್ದಕ್ಕೊಸ್ಕರ ಮರ ಗಿಡಗಳನ್ನು ಕಡಿದು ಭೂಮಿಯನ್ನು ಸಮತಟ್ಟು ಮಾಡಲಾಗುತ್ತಿತ್ತು.... ಈ ಕೆಲಸವನ್ನು ನಿರ್ವಹಣೆ ಮಾಡಲು ಶ್ರೀ ಕೃಷ್ಣ ಹಾಗು ಅರ್ಜುನನು ಅಲ್ಲಿದ್ದರು. ಈ ಸಮಯದಲ್ಲಿ ಅತೀ ಚಿಕ್ಕದಾದ ಪಕ್ಷಿಯೊಂದು ಹಾರಿಬಂದು ಭಗವಾನ್ ಕೃಷ್ಣರೇ ನನ್ನನ್ನು ಕಾಪಾಡಿ ನನ್ನ ಮಕ್ಕಳನ್ನು ಕಾಪಾಡಿ ಎಂದು ಅಳತೊಡಗಿತು. ಏನಾಯಿತು ಎಂದು ಕೇಳಿದ ಕೃಷ್ಣನಿಗೆ... ಆ ಪಕ್ಷಿ ಯಾರೋ ಬಂದು ನನ್ನ ಕೂಡು ಇರುವ ಮರವನ್ನು ಕಡಿದು ಹಾಕಿದ್ದಾರೆ. ನೋಡಲ್ಲಿ ಎಂದಾಗ.... ಭಗವಾನ್ ಕೃಷ್ಣ ನೋಡುತ್ತಾರೆ ಆ ಪಕ್ಷಿಯ ಸಣ್ಣ ಮರಿಗಳು ನೆಲದಮೇಲೆ ಬಿದ್ದಿವೆ. ಕೃಷ್ಣನು ಇಲ್ಲ ಇದು ಯುದ್ಧದ ಸಮಯ ಸಮಯ ತಿರುಗುತ್ತಿದೆ ನಾನೇನು ಮಾಡಲು ಸಾಧ್ಯವಿಲ್ಲ ಎಂದ..... ಆದರೆ ಪಕ್ಷಿ ಪಟ್ಟು ಬಿಡದೆ ನನಗೆ ನಿಮ್ಮ ಮೇಲೇ ಭರವಸೆ ಇಡುವ ಒಂದು ಸಣ್ಣ ಅದಿಕಾರವನ್ನಾದರೂ ಕೊಡಿ ಎಂದು ಗೋಗೆರೆಯಿತು..... ಭಗವಾನ್ ಕೃಷ್ಣ ಸರಿ ಎಂದ. ಮರುದಿನ ಯುದ್ಧ ಘೋಷಣೆಯಾಯಿತು. ಕೃಷ್ಣ ನು ಅರ್ಜುನನಲ್ಲಿ ನಿನ್ನ ಬಿಲ್ಲು ಬಾಣವನ್ನು ಕೊಡು ಎಂದು ಕೇಳಿದ. ಅವಕ್ಕಾದ ಅರ್ಜುನ ಭಗವಂತ ನೀವೇನು ಮಾಡುವಿರಿ ಬಿಲ್ಲ...