Posts

ಅರ್ಜುನನ ಕಣ್ಣಾಲಿಗಳು ತೇಲಿ ಬಂದವು. ಅವನು ಭಾವುಕನಾದ. ಅರ್ಜುನ ಶ್ರೀ ಕೃಷ್ಣ ನಿಗೆ ನಮಸ್ಕರಿಸಿ ಮಂಡಿಯೂರಿದ.

 ನಿಮ್ಮ ಜೀವನವನ್ನು ದೇವರ ಕೈಯಲ್ಲಿ ಸಮರ್ಪಿಸಿ ದೇವರಿಗೆ ಬಿಟ್ಟು ಬಿಡಿ.,,, ಯಾಕೆಂದರೆ ನೀವು ಜೀವನ ಪೂರ್ತಿ ಮಾಡಬಹುದಾದ ಸಾಧನೆ ದೇವರು ಒಂದೇ ಕ್ಷಣದಲ್ಲಿ ಮಾಡಿ ಮುಗಿಸುತ್ತಾನೆ...... ಇದು ಮಹಾಭಾರತ ಯುದ್ಧದ ಸಮಯ. ಯುದ್ದಕ್ಕೊಸ್ಕರ ಮರ ಗಿಡಗಳನ್ನು ಕಡಿದು ಭೂಮಿಯನ್ನು ಸಮತಟ್ಟು ಮಾಡಲಾಗುತ್ತಿತ್ತು....  ಈ ಕೆಲಸವನ್ನು ನಿರ್ವಹಣೆ ಮಾಡಲು ಶ್ರೀ ಕೃಷ್ಣ ಹಾಗು ಅರ್ಜುನನು ಅಲ್ಲಿದ್ದರು. ಈ ಸಮಯದಲ್ಲಿ ಅತೀ ಚಿಕ್ಕದಾದ ಪಕ್ಷಿಯೊಂದು ಹಾರಿಬಂದು ಭಗವಾನ್ ಕೃಷ್ಣರೇ ನನ್ನನ್ನು ಕಾಪಾಡಿ ನನ್ನ ಮಕ್ಕಳನ್ನು ಕಾಪಾಡಿ ಎಂದು ಅಳತೊಡಗಿತು.  ಏನಾಯಿತು ಎಂದು ಕೇಳಿದ ಕೃಷ್ಣನಿಗೆ...  ಆ ಪಕ್ಷಿ ಯಾರೋ ಬಂದು ನನ್ನ ಕೂಡು ಇರುವ ಮರವನ್ನು ಕಡಿದು ಹಾಕಿದ್ದಾರೆ. ನೋಡಲ್ಲಿ ಎಂದಾಗ....  ಭಗವಾನ್ ಕೃಷ್ಣ ನೋಡುತ್ತಾರೆ ಆ ಪಕ್ಷಿಯ ಸಣ್ಣ ಮರಿಗಳು ನೆಲದಮೇಲೆ ಬಿದ್ದಿವೆ.  ಕೃಷ್ಣನು ಇಲ್ಲ ಇದು ಯುದ್ಧದ ಸಮಯ ಸಮಯ ತಿರುಗುತ್ತಿದೆ ನಾನೇನು ಮಾಡಲು ಸಾಧ್ಯವಿಲ್ಲ ಎಂದ.....  ಆದರೆ ಪಕ್ಷಿ ಪಟ್ಟು ಬಿಡದೆ ನನಗೆ ನಿಮ್ಮ ಮೇಲೇ ಭರವಸೆ ಇಡುವ ಒಂದು ಸಣ್ಣ ಅದಿಕಾರವನ್ನಾದರೂ ಕೊಡಿ ಎಂದು ಗೋಗೆರೆಯಿತು.....  ಭಗವಾನ್ ಕೃಷ್ಣ ಸರಿ ಎಂದ.  ಮರುದಿನ ಯುದ್ಧ ಘೋಷಣೆಯಾಯಿತು.  ಕೃಷ್ಣ ನು ಅರ್ಜುನನಲ್ಲಿ ನಿನ್ನ ಬಿಲ್ಲು  ಬಾಣವನ್ನು ಕೊಡು ಎಂದು ಕೇಳಿದ.  ಅವಕ್ಕಾದ ಅರ್ಜುನ  ಭಗವಂತ ನೀವೇನು ಮಾಡುವಿರಿ ಬಿಲ್ಲ...

ಪ್ರಸಿದ್ದವಾದ ಹೋಟೆಲೊಂದರಲ್ಲಿ ಒಬ್ಬ ವ್ಯಕ್ತಿ ನಿಶ್ಯಬ್ದವಾಗಿ ಬಂದು

ನಾವು ಬೇರೆಯವರಿಗೆ ತಿನ್ನಿಸ್ತಿದೇವೆ ಅಥವಾ ಕೊಡುತ್ತಿದ್ದೇವೆ ಅನ್ನು ಅಹಂ ನಮ್ಮಲಿರಬಾರದು. ಯಾರಿಗೆ ಗೊತ್ತು ನಾವೇ ಬೇರೆಯವರ ಭಾಗ್ಯದಲ್ಲಿ ತಿನ್ನುತಾ ಇರಬಹುದೇನೋ...  ಪ್ರಸಿದ್ದವಾದ ಹೋಟೆಲೊಂದರಲ್ಲಿ ಒಬ್ಬ ವ್ಯಕ್ತಿ ನಿಶ್ಯಬ್ದವಾಗಿ ಬಂದು ತನಗೆ ಬೇಕಾದುದನ್ನು ಆರ್ಡರ್ ಮಾಡಿ ತಿಂದು ಸುಮ್ಮನೆ ಹಾಗೆ ಹೋಗುತ್ತಿದ್ದ.  ಆ ಹೋಟೆಲ್ನಲ್ಲಿ ಎಷ್ಟು ಜನ ತುಂಬಿರ್ತಾ ಇದ್ರು ಅಂದ್ರೆ ಆ ಜನರ ಗುಂಪಿನಲ್ಲಿ ಇವನು ಬಂದು ದುಡ್ಡು ಕೊಡದೆ ಹಾಗೆ ಹೋಗುವುದು ಯಾರೂ ಗಮನಿಸಿದಂತಿರಲಿಲ್ಲ.  ಆದರೆ ಸುಮಾರು ಒಂದು ವಾರದಿಂದ ವ್ಯಕ್ತಿಯೊಬ್ಬ ಇವನನ್ನು ಗಮನಿಸಿದ. ಅವನೊಬ್ಬ ಬಿಸಿನೆಸ್ ಮ್ಯಾನ್ ಆಗಿರೋದ್ರಿಂದ ಇದ್ಯಾಕೋ ಸರಿಯಿಲ್ಲ ಬಡವನಾದರೇನು ಧರ್ಮಕ್ಕೆ ತಿನ್ಕೊಂಡು ಹೋಗೋದು ಹೇಗೆ ?  ಈ ವಿಚಾರವನ್ನು ಈ ಹೋಟೆಲಿನ ಮಾಲಿಕನಿಗೆ ಹೇಳಲೇಬೇಕು ಎಂದು ತೀರ್ಮಾನಿಸಿ...... ಒಂದು ದಿನ ಮಾಲೀಕನೊಂದಿಗೆ ಮಾತಾಡಿದ. ನಿಮ್ಮ ಹೋಟೆಲಿಗೆ ಒಬ್ಬ ವ್ಯಕ್ತಿ ಬಂದು ದಿನಾಲೂ ಧರ್ಮಕ್ಕೆ ತಿನ್ಕೊಂಡು ಹೋಗ್ತಾನೆ ನೀವಾಗಲಿ ನಿಮ್ಮ ಕೆಲಸಗಾರರಾಗಲಿ ಇದನ್ನು ಗಮನಿಸಿದಂತಿಲ್ಲವಲ್ಲ ಎಂದ.  ಹೋಟೆಲ್ ಓನರ್ ಅಯ್ಯೋ ಅದನ್ನು ಹೇಳಲು ನೀವು ಎಷ್ಟೋತ್ತು ಕಾದಿದ್ದ ?  ನಮಗೆಲ್ಲರಿಗೂ ಗೊತ್ತಿರೋ ವಿಚಾರ ಇದು ಪರ್ವಾಗಿಲ್ಲ ಬಿಡಿ ಎಂದ.  ಅದೇಗೆ ನೀವು ಪರ್ವಾಗಿಲ್ಲ ಅಂತೀರಿ ಎಂದಾಗ ಹೋಟೆಲ್ ಓನರ್ ಈ ಹೋಟೆಲ್ನಲ್ಲಿ ಬಿಸಿನೆಸ್ ನಡೆಯೋದೆ ಅವನಿಂದ ಎಂದ. ಇದನ್ನು ಕೇಳಿ ...

ಬೇರೆಯವರ ಪ್ರತೀ ಮಾತಿಗೆ ಕಿವಿ ಕೊಟ್ಟಾಗ ನಮಗೆ ಆಗುವ ನಷ್ಟ ಬಹಳ

Image
ಒಮ್ಮೆ ಒಬ್ಬ ಮುದುಕ ಮತ್ತು ಅವನ ಮಗ ಕತ್ತೆಯನ್ನು ಮಾರಲು ಕಾಲು ನಡಿಗೆಯಲ್ಲಿ ಹೋಗುತ್ತಿದ್ದರು.   ಅವರು ಮಾರುಕಟ್ಟೆಯಿಂದ ಹಾದುಹೋಗುವಾಗ ಕೆಲವರು ಹೇಳಿದರು. "ನೋಡಿ ಅವರ ಬಳಿ ಕತ್ತೆ ಇದ್ದರೂ ಅವರು ನಡೆದುಕೊಂಡು ಹೋಗುತ್ತಿದ್ದಾರೆ. ನಿಮ್ಮಲ್ಲಿ ಒಬ್ಬರು ಕತ್ತೆಯ ಮೇಲೆ ಏಕೆ ಕುಳಿತುಕೊಳ್ಳಬಾರದು ?". ಇದನ್ನು ಕೇಳಿದ ಮುದುಕ "ನೀವು ಹೇಳಿದ್ದು ಸರಿ" ಎಂದು ಅವನು ತನ್ನ ಮಗನನ್ನು ಕತ್ತೆಯ ಮೇಲೆ ಕೂರಿಸುತ್ತಾನೆ.  ಅವರು ಹಳ್ಳಿಯಿಂದ ಹಾದುಹೋಗುವಾಗ ಒಬ್ಬ ವ್ಯಕ್ತಿ ಅಪಹಾಸ್ಯ ಮಾಡಿ ವಯಸ್ಸಾದ ತಂದೆ ಕಾಲುನಡಿಗೆಯಲ್ಲಿ. ತರುಣ ಮಗ ಕತ್ತೆಯ ಮೇಲೆ ಎಂದು ಅಪಹಾಸ್ಯ ಮಾಡುತ್ತಾನೆ.  ಈಗ ಮುದುಕ ಮಗನನ್ನು ಕೆಳಗಿಳಿಸಿ ತಾನು ಕತ್ತೆಯ ಮೇಲೆ ಕುಳಿತುಕೊಳ್ಳುತ್ತಾನೆ.  ಈಗ ಅಲ್ಲಿಂದಲೇ ಹಾದು ಹೋಗುತ್ತಿದ್ದ ಮಹಿಳೆಯೊಬ್ಬಳು "ನೋಡು ಮುದುಕನೊಬ್ಬನೇ ಕತ್ತೆಯ ಮೇಲೆ ಕುಳಿತಿದ್ದಾನೆ ಇಬ್ಬರೂ ಯಾಕೆ ಕುಳಿತುಕೊಳ್ಲಬಾರದು"  ಎಂದು ನಗುತ್ತಾಳೆ..  ಈಗ ಇಬ್ಬರೂ ಕತ್ತೆಯ ಮೇಲೆ ಕುಳಿತುಕೊಳ್ಳುತ್ತಾರೆ.  ಈಗ ದಾರಿಯಲ್ಲಿ ಹೋಗುವ ಜನರು ಇವರನ್ನು ನೋಡಿ ಮತ್ತೆ ಅಪಹಾಸ್ಯ ಮಾಡುತ್ತಾರೆ "ನೋಡಿ ಇಬ್ಬರೂ ಆ ದುರ್ಬಲ ಕತ್ತೆಯ ಮೇಲೆ ಕುಳಿತ್ತಿದ್ದಾರೆ ಇದು ಎಷ್ಟು ನಾಚಿಕೆಕೇಡು" ಈಗ ಇಬ್ಬರು ಸೇರಿ ಕಟ್ಟೆಯನ್ನು ಒಂದು ಕಂಬಕ್ಕೆ ಕಟ್ಟಿ ತಲೆಕೆಳಕ್ಕಾಗಿ ನೇತು ಹಾಕಿ ಅದನ್ನು ಹೆಗಲ ಮೇಲೇ ಹಾಕಿ ಹೊತ್ತುಕೊಂಡು ಹೋಗುತ್ತಾರೆ.  ದಾರಿ ಹೋ...

ಕಠಿಣ ಪರಿಶ್ರಮದಿಂದ ಏನು ಬೇಕಾದರೂ ಸಾದಿಸಬಹುದು.

Image
              ದುಡಿಮೆಯ ಮಹತ್ವ  ಕಠಿಣ ಪರಿಶ್ರಮದಿಂದ ಏನು ಬೇಕಾದರೂ ಸಾದಿಸಬಹುದು. ಈ ಕತೆ ಓದಿ    ಒಂದು ಊರಿನಲ್ಲಿ ತರುಣನೊಬ್ಬ ಬಲು ಸೋಮಾರಿ.   ಮನೆಯಲ್ಲಿ ಕುಳಿತು ಊಟ ಮಾಡುವುದನ್ನು ಬಿಟ್ಟು ಬೇರೆ ಏನನ್ನು ಮಾಡದೇ ಕಾಲಹರಣ ಮಾಡುತ್ತಿದ್ದ. ತಂದೆ ಹೇಳಿದ ಯಾವ ಕೆಲಸವನ್ನು ಮಾಡದೇ ಉಡಾಫೆಯಿಂದ ಇರುತ್ತಿದ್ದ.   ಇವನಿಗೆ ಪಾಠ ಕಲಿಸಲು ತಂದೆ ಉಪಾಯ ಮಾಡಿದ.   ನಾಳೆ ಬೆಳಿಗ್ಗೆ ನೀನು ಹೊರಗೆ ದುಡಿದು 5೦ ರೂಪಾಯಿ ತಂದರೆ ಮನೆಗೆ ಬಾ ಇಲ್ಲವಾದಲ್ಲಿ ನಿನಗೆ ಪ್ರವೇಶವಿಲವೆಂದು ಖಡಾಖಂಡಿತವಾಗಿ ಮಗನಿಗೆ ಹೇಳಿದರು.   ದಿಕ್ಕು ಕಾಣದ ತರುಣ ಮಿತ್ರನ ಬಳಿ ಗೊಗೊರೆದು 5೦ ರೂಪಾಯಿ ಪಡೆದು ತಂದ ತಂದೆಗೆ ನೀಡಿದ. ಇದನ್ನು ನೋಡಿದ ತಂದೆ ಆ ಹಣವನ್ನು ಮನೆಯಲ್ಲಿದ್ದ ಬಾವಿಗೆ ಹಾಕಿದರು ನಾಳೆ ಮತ್ತೆ 5೦ ರೂಪಾಯಿ ದುಡಿದು ತರಲು ಸೂಚಿಸಿದರು. ತರುಣ ಯಥಾ ಪ್ರಕಾರ ಬಂದುಗಳ ಬಳಿ ಕಾಡಿ ಬೇಡಿ ಹಣ ಸಂಗ್ರಹಿಸಿ ತಂದು ತಂದೆಗೆ ಕೊಟ್ಟದ್ದಾಯಿತು.   ಮತ್ತೆ ಅದೇ ಪ್ರಕಾರ ತಂದೆ ಆ ಹಣವನ್ನು ಬಾವಿಗೆ ಹಾಕಿದರು. ಮತ್ತೆ 5೦ ರೂಪಾಯಿ ತರಲು ಆಜ್ನ್ಯಾಪಿಸಿದರು. ಆದರೆ ತರುಣನಿಗೆ ೫೦ ರೂಪಾಯಿ ಸಿಗಲಿಲ್ಲ. ಯಾರೂ ಕೊಡಲಿಲ್ಲ.   ಈಗ ತರುಣನಿಗೆ ಪೀಕಲಾಟ. ತರುಣ ದಾರಿ ಕಾಣದೆ ಊರಲ್ಲಿದ್ದ ಅಂಗಡಿಯಲ್ಲಿ ದುಡಿದು ಶ್ರಮಪಟ್ಟು ೫೦ ರೂಪಾಯಿ ತಂದು ತಂದೆಗೆ ನೀಡಿದ. ತಂದೆ ಆ ಹಣವನ್ನು...